ರಚನೆ : ಗೋಪಾಲಕೃಷ್ಣ ಅಡಿಗ
ಗಾಯನ : ರತ್ನಮಾಲ ಪ್ರಕಾಶ್
ಸಂಗೀತ : ರಾಜು ಅನಂತಸ್ವಾಮಿ,

ಗಾಯನ : ಸಂಗೀತ ಕಟ್ಟಿ
ಸಂಗೀತ : ಮಾನೋ ಮೂರ್ತಿ
ಚಲನಚಿತ್ರ : ಅಮೆರಿಕಾ ಅಮೆರಿಕಾ (೧೯೯೬)
ಗಾಯನ : ರಾಜು ಅನಂತಸ್ವಾಮಿ, ಸಂಗೀತ ಕಟ್ಟಿ
ಚಲನಚಿತ್ರ : ಅಮೆರಿಕಾ ಅಮೆರಿಕಾ (೧೯೯೬)
ನಟರು : ಹೇಮಾ ಪಂಚಮುಖಿ, ರಮೇಶ್ ಅರವಿಂದ್

ಯಾವ ಮೋಹನ ಮುರಳಿ ಕರೆಯಿತು / Yaava Mohana Murali Kareyitu – Kannada Bhavageethegalu

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ||

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ ।।೧।।

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ? ।।೨।।

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ವಿವಶವಾಯಿತು ಪ್ರಾಣ – ಹಾ!!
ವಿವಶವಾಯಿತು ಪ್ರಾಣ  ಹಾ
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ – ಹಾ!!

ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ ।।೩।।

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ಯಾವ ಮೋಹನ ಮುರಳಿ ಕರೆಯಿತು / Yaava Mohana Murali Kareyitu – Kannada Bhavageethegalu

ಶ್ರೀ ಗೋಪಾಲಕೃಷ್ಣ ಅಡಿಗ  ಬರೆದ ಭಾವಗೀತೆ ಮೋಹನ ಮುರಳಿ ಕರೆಯಿಥು ಗೀತಯ  ರಚನೆಕಾರ. ಮೈಸೂರು ಅನಂತ ಸ್ವಾಮಿ ಸಂಗೀತ ಸಂಯೋಜಿಸಿದ್ದಾರೆ. ಗಾಯಕ- ರತ್ನಮಲಾ ಪ್ರಕಾಶ್.

ಈ ಸುಂದರವಾದ ಹಾಡನ್ನು ಕನ್ನಡದಲ್ಲಿ ‘ಅಮೇರಿಕಾ ಅಮೇರಿಕಾ’ (1996) ಚಿತ್ರದಲ್ಲಿ ಅಳವಡಿಸಲಾಗಿದೆ. ಚಿತ್ರದ ಈ ಅದ್ಭುತ ಹಾಡನ್ನು ಶ್ರೀ ಮನೋಹರ್ ಮೂರ್ತಿ ನಿರ್ದೇಶಿಸಿದ್ದಾರೆ. ಗಾಯಕ ಸಂಗೀತ ಕಟ್ಟಿ ಮತ್ತು ದಿವಂಗತ ರಾಜು ಅನಂತ್ಸ್ವಾಮಿ. ತಾರಾಗಣ – ಹೇಮಾ ಪಂಚಮುಕಿ ಮತ್ತು ರಮೇಶ್ ಅರವಿಂದ್.

Innu Dayabarade Dasana Mele – Purandara Daasara Keerthanegalu

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

Haalalladaru haaku, Neeralladaru haaku Raghavendra

Shri Lalitha Sahasranama English Lyrics

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.