by Sia | Feb 1, 2022 | Purandara dasara Keerthanegalu, Devotional Songs, Kannada Lyrics, Uncategorized
ಕೀರ್ತನಕಾರರು : ಪುರಂದರದಾಸರು
ರಾಗ : ಜಂಜೂಟಿ
ತಾಳ : ಆದಿ
ರಾಮಕೃಷ್ಣರು ಮನೆಗೆ ಬಂದರು / Ramakrishnaru Manege Bandaru
ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ ।।ಪ।।
ಕಾಮಧೇನು ಬಂದಂತಾಯಿತು ವರವ ಬೇಡಿರೆ ।।ಅ.ಪ॥
ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ
ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ।।೧।।
ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ
ಕಾಮಧೇನು ಬಂದಂತಾಯಿತು ವರವ ಬೇಡಿರೆ
ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ
ಸುಕುಮಾರ ಸುಂದರವಾದ ಉಡಿಗೆ ಉಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ।।೨।।
ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ
ಕಾಮಧೇನು ಬಂದಂತಾಯಿತು ವರವ ಬೇಡಿರೆ
ಪೊಕ್ಕುಳಲಿ ಅಜನ ಪಡೆದ ದೇವದೇವನು
ಚಿಕ್ಕ ಅಂಗುಷ್ಟದಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯನವ ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ।।೩।।
ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ
ಕಾಮಧೇನು ಬಂದಂತಾಯಿತು ವರವ ಬೇಡಿರೆ
ಸೂಚನೆ :
ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.
by Sia | Jan 31, 2022 | Bhavageethe - Kannada, Bhavageethe, Uncategorized
ಕನ್ನಡ ಭಾವಗೀತೆ
ಹಾಡು: ಇದೋ ನಿಮಗೆ ವಂದನೆ
ಸಾಹಿತ್ಯ: ಜಿ.ಎಸ್ ಶಿವರುದ್ರಪ್ಪ
ಇದೋ ನಿಮಗೆ ವಂದನೆ / Ido Nimage Vandane
ಕಾರ್ಗಿಲ್ಲಿನ ಗಡಿಗಳಲ್ಲಿ
ಸಿಡಿಗುಂಡಿಗೆ ಎದೆಯನೊಡ್ಡಿ
ಕಾದಾಡುವ ಕಲಿಗಳೇ
ತತ್ತರಿಸುವ ಎತ್ತರದಲಿ
ಧೈರ್ಯದ ಧ್ವಜವೆತ್ತಿ ನಡೆವ
ಪರಾಕ್ರಮದ ಕಿಡಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.
ಶ್ವೇತ ಶುಭ್ರ ಹಿಮಾಲಯದ
ಭವ್ಯ ಧವಳ ಭಿತ್ತಿಗಳಲಿ
ರಕ್ತಲಿಪಿಯ ಶಾಸನಗಳ
ಬರೆದ ಮಹಾ ಕಲಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ
ದುರ್ಗಮ ಹಿಮ ಶಿಖರದಲ್ಲಿ
ಆಕ್ರಮಣವನೆದುರಿಸುತ್ತ
ಹುತಾತ್ಮರಾದ ಯೋಧರೇ
ಸ್ಪಂದಿಸುತಿದೆ ನಿಮ್ಮ ಹಿಂದೆ
ಕಂಬನಿಯಲಿ ಹೆಮ್ಮೆಯಲ್ಲಿ
ಈ ಅಖಂಡ ದೇಶವೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.
ಇದೋ ನಿಮಗೆ ವಂದನೆ / Ido Nimage Vandane
kn.wikipedia.org/wiki/ಜಿ.ಎಸ್.ಶಿವರುದ್ರಪ್ಪ(opens in a new tab)
ಸೂಚನೆ :
ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.
by Sia | Jan 21, 2022 | Purandara dasara Keerthanegalu, Devotional Songs, Kannada Lyrics, Uncategorized
ಪುರಂದರ ದಾಸರು
Nammamma Sharade – ನಮ್ಮಮ್ಮ ಶಾರದೆ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ… ಕಣಮ್ಮ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ …… ಕಣಮ್ಮ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ
ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೇ… ಕಣಮ್ಮ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿ ನೆಲೆ ಆದಿಕೇಶವ ದಾಸ ಕಣೇ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ನಿಮ್ಮೊಳಗಿಹನಾರಮ್ಮಾ
ನಿಮ್ಮೊಳಗಿಹನಾರಮ್ಮಾ….