Naayi talimyalina butti samsaara – C Ashwath song / ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ- ಸಿ. ಅಶ್ವಥ್ ಹಾಡು

Naayi talimyalina butti samsaara – C Ashwath song / ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ- ಸಿ. ಅಶ್ವಥ್ ಹಾಡು

ಹಾಡು: ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

ಸಾಹಿತ್ಯ: ಎಚ್.ಎಸ್.ವೆಂಕಟೇಶ ಮೂರ್ತಿ

ಸಂಗೀತ/ ಗಾಯಕ: ಸಿ. ಅಶ್ವಥ್

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ -ಕನ್ನಡದಲ್ಲಿ ಸಾಹಿತ್ಯ

ಜವದನ ಬೇಡುವೆ / Gajavadana Beduve

Famous Keerthane By Purandara Daasaru -Nammamma Sharade – ನಮ್ಮಮ್ಮ ಶಾರದೆ

Sri Mahalaxmi Ashtottara Shatanamavali: 108 names of Goddess Lakshmi 

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ- Naayi talimyalina butti samsaara – ಸಿ. ಅಶ್ವಥ್ ಹಾಡು- ಕನ್ನಡದಲ್ಲಿ ಸಾಹಿತ್ಯ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

ಬಲು ದುಸ್ಸಾರ ಇದನರಿತು ಅರಿತು

ಮಂದಿ ಬಿದ್ದಾರ, ಹಿಂದ ಬಿದ್ದಾರ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

ಬಲು ದುಸ್ಸಾರ ಇದನರಿತು ಅರಿತು

ಮಂದಿ ಬಿದ್ದಾರ, ಹಿಂದ ಬಿದ್ದಾರ

ಕೈಯ್ಯಿ ನಡೆಯೋ ಕಾಲ, ಕೈಗೊಬ್ಬ ಕಾಲ್ಗೊಬ್ಬ

ಕೈಯ್ಯಿ ನಡೆಯೋ ಕಾಲ, ಕೈಗೊಬ್ಬ ಕಾಲ್ಗೊಬ್ಬ

ಕೈಸೋತ ಕಾಲಕ್ಕೆ ಬಿಡ್ತಾರೋ, ಕೈಯ್ಯ ಬಿಡ್ತಾರೋ

ತೊರೆ ತುಂಬಿ ಹರಿವಾಗ ದೊಣೆಕಾರ ದೇವರು

ತೊರೆ ತುಂಬಿ ಹರಿವಾಗ ದೊಣೆಕಾರ ದೇವರು

ಹೊಳೆಯ ದಾಟಿದ ಮ್ಯಾಲೆ

ಅವನ್ಯಾರೋ ತಮ್ಮ ಇವನ್ಯಾರೋ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

ಬಲು ದುಸ್ಸಾರ ಇದನರಿತು ಅರಿತು

ಮಂದಿ ಬಿದ್ದಾರ, ಹಿಂದ ಬಿದ್ದಾರ

ನೀರು ತುಂಬಿದ ಕೆರೆ ಗಂಗವ್ವ ಎನುತಾರೆ

ನೀರು ತುಂಬಿದ ಕೆರೆ ಗಂಗವ್ವ ಎನುತಾರೆ

ನೀರೊಣಗಿದ ಮ್ಯಾಲೆ ಅಗಿತಾರೋ

ಹೊಟ್ಟೆ ಬಗಿತಾರೋ

ಜೀವ ಇರೋ ತನಕ ಮಾನ ಅವಮಾನ

ಜೀವ ಇರೋ ತನಕ ಮಾನ ಅವಮಾನ

ಸತ್ತ ಮೇಲೆ ಎತ್ತಿ ಹೊಗಿತಾರೊ

ತಮ್ಮ ಉಗಿತಾರೋ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

ಬಲು ದುಸ್ಸಾರ ಇದನರಿತು ಅರಿತು

ಮಂದಿ ಬಿದ್ದಾರ, ಹಿಂದ ಬಿದ್ದಾರ

ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ

ಬಲು ದುಸ್ಸಾರ ಇದನರಿತು ಅರಿತು

ಮಂದಿ ಬಿದ್ದಾರ, ಹಿಂದ ಬಿದ್ದಾರ

Naayi talimyalina butti samsaara / ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ – ಸಿ. ಅಶ್ವಥ್ ಹಾಡು

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ -ಕನ್ನಡದಲ್ಲಿ ಸಾಹಿತ್ಯ

ಜವದನ ಬೇಡುವೆ / Gajavadana Beduve

Famous Keerthane By Purandara Daasaru -Nammamma Sharade – ನಮ್ಮಮ್ಮ ಶಾರದೆ

Sri Mahalaxmi Ashtottara Shatanamavali: 108 names of Goddess Lakshmi 

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene – ದಾ.ರಾ ಬೇಂದ್ರೆ

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene – ದಾ.ರಾ ಬೇಂದ್ರೆ

ಯಾಕೋ ಕಾಣೆ ರುದ್ರ ವೀಣೆ

ಮಿಡಿಯುತಿರುವುದು

ಜೀವದಾಣೆಯಂತೆ ತಾನೆ

ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ

ಸೊಲ್ಲು ಸಿಡಿದು ಗುಡುಗುತಿದೆ

ಮಿಡಿದ ಬೆರಳು ಅಡಗುತಿದೆ

ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ

ಸೂರ್ಯಚಂದ್ರ ಈಸುತಿವೆ

ಹೊಸ ಬೆಳಕನೆ ಹಾಸುತಿವೆ

ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ

ಸಿಂಹಾಸನ ಉರುಳುತಿವೆ

ಜಾತಿ ಪಂಥ ತೆರಳುತಿವೆ

ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ

ಬೆಟ್ಟದೆದೆಯು ಬಿರಿಯುತಿದೆ

ನೀರು ಮೀರಿ ಹರಿಯುತಿದೆ

ಕೆಂಪು ನೆಲದಲಿ.

                                    -ಅಂಬಿಕಾತನಯ ದತ್ತ

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene- ಕನ್ನಡದಲ್ಲಿ ಸಾಹಿತ್ಯ

ಕೋಡಗನ ಕೋಳಿ ನುಂಗಿತ್ತಾ / Kodagana Koli Nungitha – ಸಂತಾ ಶಿಶುನಾಳ್ ಷರೀಫ್

Raghavendra Raghavendra Raghavendra Yenniri / ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ -ಪ್ರಸಿದ್ಧ (Famous) ರಾಘವೇಂದ್ರ ಸ್ವಾಮಿ ಪೂಜಾ ಹಾಡು–ಕನ್ನಡದಲ್ಲಿ ಸಾಹಿತ್ಯ

Hrudaya samudra kalaki / ಹೃದಯ ಸಮುದ್ರ ಕಲಕಿ – ಕನ್ನಡ ಸಾಹಿತ್ಯ

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.

ಕೋಡಗನ ಕೋಳಿ ನುಂಗಿತ್ತಾ / Kodagana Koli Nungitha – ಸಂತಾ ಶಿಶುನಾಳ್ ಷರೀಫ್

ಕೋಡಗನ ಕೋಳಿ ನುಂಗಿತ್ತಾ / Kodagana Koli Nungitha – ಸಂತಾ ಶಿಶುನಾಳ್ ಷರೀಫ್

ಗಾಯಕ: ಸಿ.ಅಶ್ವಥ್

ಸಾಹಿತ್ಯ: ಸಂತಾ ಶಿಶುನಾಳ್ ಷರೀಫ್

ರಾಗ: ಮದ್ಯಮತ್ ಸಾರಂಗ

ಭಾಷೆ – ಕನ್ನಡ

ಗೀತವಿಹಾರ / ತತ್ವ ಪದಗಳು

ಕೋಡಗನ ಕೋಳಿ ನುಂಗಿತ್ತಾ / Kodagana Koli Nungitha – ಕನ್ನಡದಲ್ಲಿ ಸಾಹಿತ್ಯ

ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿ ನುಂಗಿತ್ತಾ, ನೋಡವ್ವ ತಂಗಿ

ಕೋಡಗನ ಕೋಳಿ ನುಂಗಿತ್ತಾ

ಆಡು ಆನೆಯ ನುಂಗಿ

ಗೋಡೆ ಸುಣ್ಣವ ನುಂಗಿ

ಆಡು ಆನೆಯ ನುಂಗಿ, ಗೋಡೆ ಸುಣ್ಣವ ನುಂಗಿ

ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ, ತಂಗಿ

ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ

ಕೋಡಗನ ಕೋಳಿ ನುಂಗಿತ್ತಾ

Kodagana Koli Nungitha -Santha-Shishunala-Sharif

ಒಳ್ಳು ಒನಕೆಯ ನುಂಗಿ

ಕಲ್ಲು ಗೂಟವ ನುಂಗಿ

ಒಳ್ಳು ಒನಕೆಯ ನುಂಗಿ, ಕಲ್ಲು ಗೂಟವ ನುಂಗಿ

ಮೆಲ್ಲಲು ಬಂದ ಮುದುಕಿಯನ್ನೇ ನೆಲ್ಲು ನುಂಗಿತ್ತಾ, ತಂಗಿ

ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ

ಕೋಡಗನ ಕೋಳಿ ನುಂಗಿತ್ತಾ

ಎತ್ತು ಜಟ್ಟಗಿ ನುಂಗಿ

ಬತ್ತ ಬಾನವ ನುಂಗಿ

ಎತ್ತು ಜಟ್ಟಗಿ ನುಂಗಿ, ಬತ್ತ ಬಾನವ ನುಂಗಿ

ಮುಕ್ಕುಟ ತಿರುವು ಅಣ್ಣ ನನ್ನ ಮೇಲಿ ನುಂಗಿತ್ತ ತಂಗಿ

ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ

ಕೋಡಗನ ಕೋಳಿ ನುಂಗಿತ್ತಾ

ಗುಡ್ಡ ಗವಿಯನು ನುಂಗಿ

ಗವಿಯು ಇರುವೆಯ ನುಂಗಿ

ಗುಡ್ಡ ಗವಿಯನು ನುಂಗಿ, ಗವಿಯು ಇರುವೆಯ ನುಂಗಿ

ಗೋವಿಂದ ಗುರುವಿನ ಪಾದ ನನ್ನನೇ ನುಂಗಿತ್ತಾ, ತಂಗಿ

ಕೋಡಗನ ಕೋಳಿ ನುಂಗಿತ್ತಾ ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ.

ಕೋಡಗನ ಕೋಳಿ ನುಂಗಿತ್ತಾ ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ,

ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿ ನುಂಗಿತ್ತಾ

ಕೋಡಗನ ಕೋಳಿ ನುಂಗಿತ್ತಾ / Kodagana Koli Nungitha

SREE VISHNU SAHASRANAMA STOTRAM 

ಕಟ್ಟುವೆವು ನಾವು / Kattuvevu Naavu

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.

ಇದೋ ನಿಮಗೆ ವಂದನೆ / Ido Nimage Vandane

ಇದೋ ನಿಮಗೆ ವಂದನೆ / Ido Nimage Vandane

ಕನ್ನಡ ಭಾವಗೀತೆ

ಹಾಡು: ಇದೋ ನಿಮಗೆ ವಂದನೆ

ಸಾಹಿತ್ಯ: ಜಿ.ಎಸ್ ಶಿವರುದ್ರಪ್ಪ

ಇದೋ ನಿಮಗೆ ವಂದನೆ / Ido Nimage Vandane

ಕಾರ್ಗಿಲ್ಲಿನ ಗಡಿಗಳಲ್ಲಿ

ಸಿಡಿಗುಂಡಿಗೆ ಎದೆಯನೊಡ್ಡಿ

ಕಾದಾಡುವ ಕಲಿಗಳೇ

ತತ್ತರಿಸುವ ಎತ್ತರದಲಿ

ಧೈರ್ಯದ ಧ್ವಜವೆತ್ತಿ ನಡೆವ

ಪರಾಕ್ರಮದ ಕಿಡಿಗಳೇ

ಇದೋ ನಿಮಗೆ ವಂದನೆ

ಕೃತಜ್ಞತೆಯ ವಂದನೆ.

ಶ್ವೇತ ಶುಭ್ರ ಹಿಮಾಲಯದ

ಭವ್ಯ ಧವಳ ಭಿತ್ತಿಗಳಲಿ

ರಕ್ತಲಿಪಿಯ ಶಾಸನಗಳ

ಬರೆದ ಮಹಾ ಕಲಿಗಳೇ

ಇದೋ ನಿಮಗೆ ವಂದನೆ

ಕೃತಜ್ಞತೆಯ ವಂದನೆ

ದುರ್ಗಮ ಹಿಮ ಶಿಖರದಲ್ಲಿ

ಆಕ್ರಮಣವನೆದುರಿಸುತ್ತ

ಹುತಾತ್ಮರಾದ ಯೋಧರೇ

ಸ್ಪಂದಿಸುತಿದೆ ನಿಮ್ಮ ಹಿಂದೆ

ಕಂಬನಿಯಲಿ ಹೆಮ್ಮೆಯಲ್ಲಿ

ಈ ಅಖಂಡ ದೇಶವೇ

ಇದೋ ನಿಮಗೆ ವಂದನೆ

ಕೃತಜ್ಞತೆಯ ವಂದನೆ.

ಇದೋ ನಿಮಗೆ ವಂದನೆ / Ido Nimage Vandane

kn.wikipedia.org/wiki/ಜಿ.ಎಸ್.ಶಿವರುದ್ರಪ್ಪ(opens in a new tab)

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.

ಬದುಕು ಮಾಯೆಯ ಮಾಟ/Baduku Mayeya Maata

ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಬ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

 – ಅಂಬಿಕಾತನಯದತ್ತ  

ಬದುಕು ಮಾಯೆಯ ಮಾಟ/Baduku Mayeya Maata

ಕಟ್ಟುವೆವು ನಾವು / Kattuvevu Naavu

ಮೊಗೇರಿ ಗೋಪಾಲಕೃಷ್ಣ ಅಡಿಗ

ಕಟ್ಟುವೆವು ನಾವು ಹೊಸ ನಾಡೊಂದನು, – ರಸದ ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

ನಮ್ಮೆದೆಯ ಕನಸುಗಳೇ ಕಾಮಧೇನು
ಆದಾವು, ಕರೆದಾವು ವಾ೦ಛಿತವನು
ಕರೆವ ಕೈಗಿಹುದೋ ಕನಸುಗಳ ಹರಕೆ;
 ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

ನಾವು ಹಿಂದೆಗೆವೆವೇ? ವೀರ ತರುಣರು ನಾವು!
ಒಂದೆ ನೆಗೆತಕೆ ನೆಗೆವೆವೋ ಕಂದಕವನು,
ಕುಟ್ಟಿ ಪುಡಿಮಾಡುವೆವು ಕೋಟೆಗಳನು,            
ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

ಎಡರುಗಳ ಕಡಲುಗಳನೀಸಿ ಬರುವೆವು, ಘೋರ
ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ                  
ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು
ಹೊರಹೊಮ್ಮುವುದ ಕಾದು ನೋಡು!

ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು;
ಅದರ ಹಾರಾಟಕ್ಕೆ ಬಾನೆ ಗಡಿಯು,
 ಬರಲು ಬಿಡೆವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
ಕೊಟ್ಟೆವಿದೋ ವೀಳೆಯವನು;
ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
 ಕಟ್ಟುವೆವು ನಾವು ಹೊಸ ನಾಡೊಂದನು, – ಸುಖದ ಬೀಡೊಂದನು

ಕಟ್ಟುವೆವು ನಾವು / Kattuvevu Naavu

ಮೊಗೇರಿ ಗೋಪಾಲಕೃಷ್ಣ ಅಡಿಗ