ಹಾಡು: ಬಾರಿಸು ಕನ್ನಡ ಡಿಂಡಿಮವ
ಪ್ರಕಾರ (ಗಳು): ಭಾವಗೀತೆ
ರಚನೆ: ಕುವೆಂಪು (ಕೆ.ವಿ. ಪುಟ್ಟಪ್ಪ)
ಗಾಯನ: ಶಿವಮೊಗ್ಗ ಸುಬ್ಬಣ್ಣ , ರವಿ ಮೂರೂರು, ವಿನಯ್ ಕುಮಾರ್, ಉದಯ್ ಅಂಕೋಲಾ, ಸುಪ್ರಿಯಾ ಆಚಾರ್ಯ, ಮಂಗಳಾ ರವಿ
ಸಂಗೀತ :ಶಿವಮೊಗ್ಗ ಸುಬ್ಬಣ್ಣ
ಕವನಗಳು : ಕವನ ಸಂಕಲನಗಳು

ಬಾರಿಸು ಕನ್ನಡ ಡಿಂಡಿಮವ – ಕುವೆಂಪು ಗೀತೆಗಳು ( Kuvempu songs)

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ ll
ಬಾರಿಸು ಕನ್ನಡ ಡಿಂಡಿಮವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ ll

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ ll

Baarisu Kannada Dindimava / ಬಾರಿಸು ಕನ್ನಡ ಡಿಂಡಿಮವ – ಕನ್ನಡ ಭಾವಗೀತೆಗಳು

ರಾಷ್ಟ್ರ ಕವಿ ಕುವೆಂಪು (ಕೆ.ವಿ. ಪುಟ್ಟಪ್ಪ) ರವರು ರಚಸಿದಭಾವಗೀತೆ ಬಾರಿಸು ಕನ್ನಡ ಡಿಂಡಿಮವ

ಗಾಯಕರು ಶಿವಮೊಗ್ಗ ಸುಬ್ಬಣ್ಣ , ರವಿ ಮೂರೂರು, ವಿನಯ್ ಕುಮಾರ್, ಉದಯ್ ಅಂಕೋಲಾ, ಸುಪ್ರಿಯಾ ಆಚಾರ್ಯ, ಮಂಗಳಾ ರವಿ. ಇದನ್ನು ಕನ್ನಡ ಕವನ ಸಂಕಲನಗಳು ಇಂದ ಆರಿಸಿಕೊಳ್ಳಲಾಗಿದೆ.

Powerful Hanuman Chalisa Lyrics in English

Shri Lalitha Sahasranama English Lyrics

Shri Vishnu Sahasranama – English Lyrics

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.