Raga: Naata
Tala: Khandachapu
Composer: Purandara Dasa
Language: Kannada
ವಂದಿಸುವುದಾದಿಯಲಿ ಗಣನಾಥನ / Vandisuvudadiyali Gananathana
ವಂದಿಸುವುದಾದಿಯಲಿ ಗಣನಾಥನ |
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ ಇದಕುಂಟು ||
ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ||೧||
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||೨||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ||೩||
ವಿವರಗಳು:
ಶ್ರೀ ಪುರಂದರ ದಾಸರು ಶ್ರೀಕೃಷ್ಣನ ಮಹಾನ್ ಭಕ್ತ ಮತ್ತು 16 ನೇ ಶತಮಾನದಲ್ಲಿನ ಹರಿದಾಸರಲ್ಲಿ ಮೊದಲನೆಯವನು. ಶ್ರೀ ಪುರಾಂದರ ದಾಸರು ಹರಿದಾಸ ಕೀರ್ತನೆಗಳ ಕವಿ, ಸಂಯೋಜಕರು ಮತ್ತು ಭಕ್ತಿ ಗಾಯಕರಾಗಿದ್ದರು. ಸಂಗೀತಶಾಸ್ತ್ರಜ್ಞರು ಕರ್ನಾಟಕ ಸಂಗೀತದ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ) “ಸಂಗೀತ ಪಿತಾಮಹ” ಎಂದು ಪರಿಗಣಿಸುತ್ತಾರೆ ಮತ್ತು 40 ವರ್ಷಗಳ ಅವಧಿಯಲ್ಲಿ 475000 ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.
Shivatandavastotram – Powerful Recitation
ಸೂಚನೆ :
ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.
Very good book
Thank you so much for the kannada lyrics…..
Please send the meaning of vandhisuva dadiyali bhajan