– ಶ್ರೀ ಪುರಾಂದರ ದಾಸರು

Jo Jo Shri Krishna Paramaananda / ಜೋ ಜೋ ಶ್ರೀಕೃಷ್ಣ ಪರಮಾನಂದ

ಜೋ ಜೋ ಶ್ರೀಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ||

ಪಾಲಗಡಲೊಳು ಪವಡಿಸಿದವನೇ
ಆಲದೆಲೆಯ ಮೇಲೆ ಮಲಗಿದ ಶಿಶುವೇ
ಶ್ರೀಲತಾಂಗಿಯರ ಚಿತ್ತದೊಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||

ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ ||

ಜೋ ಜೋ ಶ್ರೀಕೃಷ್ಣ ಪರಮಾನಂದ

Jo Jo Shri Krishna – Image Credit: pedia.desibantu.com

ಯಾರ ಕಂದ ನೀನಾರ ನಿಧಾನೀ
ಆರ ರತ್ನವೊ ನೀನಾರ ಮಾಣಿಕವೋ
ಸೇರಿತು ಎನಗೊಂದು ಚಿಂತಾಮಣಿ ಎಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ ||

ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆ ತಂದುಕೋ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ ||

ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ ||

ಪ್ರಸಿದ್ಧ ಕನ್ನಡ ಜೋಗುಲ ಹಾಡುಗಳು – ಜೋ ಜೋ ಶ್ರೀಕೃಷ್ಣ ಪರಮಾನಂದ / Famous Kannada Jogula Song – Jo Jo Shri Krishna Paramaananda

“ಜೋ ಜೋ ಶ್ರೀ ಕೃಷ್ಣ” ಎನ್ನುವುದು “ಸಂಗೀತ ಪಿತಾಮಹ” ಪುರಂದರದಾಸ್ (1484 – 1564) ಬರೆದ ಕವಿತೆ. ಇದು ಸರಳವಾದ ಕನ್ನಡ ಭಾಷೆಯಿಂದ ಕೂಡಿದ್ದು ಇನ್ನೂ ಸುಂದರವಾದ ಸಾಲುಗಳನ್ನು ಹೊಂದಿದೆ. ಈ ಹಾಡಿನಲ್ಲಿ ಯಶೋದ, ಶಿಶು ಕೃಷ್ಣನ ತಾಯಿ ತನ್ನ ಮಗನನ್ನು ಮೆಚ್ಚಿಸಿ ನಿದ್ರೆಗೆ ಹೋಗುವಂತೆ ಒತ್ತಾಯಿಸುವ ಮೂಲಕ ಅವನಿಗೆ ಹಾಡುತ್ತಾಳೆ

Famous Krishna Song – Thoogire Rangana Thoogire Krishnana – Kannada Bhavageethe

ವಂದಿಸುವುದಾದಿಯಲಿ ಗಣನಾಥನ / Vandisuvudadiyali Gananathana – ಪುರಂದರ ದಾಸರ ಕೀರ್ತನೆಗಳು

ಮರಳಿ ಮನಸಾಗಿದೆ / Marali Manasaagide – ಚಿತ್ರ : ಜಂಟಲ್ಮನ್

Yaava Mohana Murali Kareyitu – Kannada Bhavageethegalu

ಅಯಿಗಿರಿ ನಂದಿನಿ Lyrics in Kannada – LYRICS NEST

ಮಧ್ಯಾಹ್ನ ಆರತಿ, ಕನ್ನಡ ಸಾಹಿತ್ಯ : ಶಿರಡಿ ಸಾಯಿಬಾಬಾ ಸ್ತೋತ್ರಮ್ – LYRICS NEST

Sri Lakshmi Ashtottara Satanama Stotram‌ Lyrics In English

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.