ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ– Nara janma bandaaga naalige iruvaga Krishna enabarade

ಪುರಂದರ ದಾಸರ ಕೀರ್ತನೆಗಳು

ರಚಿಸಿದವರು. : ಶ್ರೀ ಪುರಾಂದರ ದಾಸರು

ರಾಗ: ಸೌರಾಷ್ಟ್ರ – 

ತಾಳ: ಛಾಪು ತಾಳ

ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣ ಎನಬಾರದೆ

ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣ ಎನಬಾರದೆ
ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ
ಕೃಷ್ಣ ಎನಬಾರದೆ

ಸ್ನಾನ ಪಾನ ಜಪ ತಪಗಳ ಮಾಡುತ
ಕೃಷ್ಣ ಎನಬಾರದೆ
ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ
ಕೃಷ್ಣ ಎನಬಾರದೆ

ಮೇರೆ ತಪ್ಪಿ ಮಾತನಾಡುವಗಲೊಮ್ಮೆ
ಕೃಷ್ಣ ಎನಬಾರದೆ
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ
ಕೃಷ್ಣ ಎನಬಾರದೆ

ಗಂಧವ ಪೂಸಿ ತಾಂಬೂಲವ ಮೆಲುವಾಗ
ಕೃಷ್ಣ ಎನಬಾರದೆ ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ
ಕೃಷ್ಣಎನಬಾರದೆ

ಪರಿಹಾಸ್ಯದ ಮಾತನಾಡುತಲೊಮ್ಮೆ
ಕೃಷ್ಣ ಎನಬಾರದೆ
ಪರಿ ಪರಿ ಕೆಲಸದೊಳೊಂದು ಕೆಲಸವೆಂದು
ಕೃಷ್ಣ ಎನಬಾರದೆ

ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೆ
ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ
ಕೃಷ್ಣ ಎನಬಾರದೆ

ನೀಗದಾಲೋಚನೆ ರೋಗೋಪದ್ರವದಲೊಮ್ಮೆ
ಕೃಷ್ಣ ಎನಬಾರದ
ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ
ಕೃಷ್ಣ ಎನಬಾರದೆ

ದುರಿತರಾಶಿಗಳನು ತರಿದು ಬಿಸಾಡುವ
ಕೃಷ್ಣ ಎನಬಾರದೆ
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ
ಕೃಷ್ಣ ಎನಬಾರದೆ

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ– Nara janma bandaaga naalige iruvaga Krishna enabarade

ವಿವರಗಳು:

ಶ್ರೀ ಪುರಂದರ ದಾಸರು ಶ್ರೀಕೃಷ್ಣನ ಮಹಾನ್ ಭಕ್ತ ಮತ್ತು 16 ನೇ ಶತಮಾನದಲ್ಲಿನ ಹರಿದಾಸರಲ್ಲಿ ಮೊದಲನೆಯವನು. ಶ್ರೀ ಪುರಾಂದರ ದಾಸರು ಹರಿದಾಸ ಕೀರ್ತನೆಗಳ ಕವಿ, ಸಂಯೋಜಕರು ಮತ್ತು ಭಕ್ತಿ ಗಾಯಕರಾಗಿದ್ದರು. ಸಂಗೀತಶಾಸ್ತ್ರಜ್ಞರು ಕರ್ನಾಟಕ ಸಂಗೀತದ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ) “ಸಂಗೀತ ಪಿತಾಮಹ” ಎಂದು ಪರಿಗಣಿಸುತ್ತಾರೆ ಮತ್ತು 40 ವರ್ಷಗಳ ಅವಧಿಯಲ್ಲಿ 475000 ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.

Haalalladaru haaku, Neeralladaru haaku Raghavendra

Lingashtakam Lyrics in English

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ / Innastu Bekenna Hrudayakke Rama