ಸಾಹಿತ್ಯ – ಜಿ. ಪಿ. ರಾಜರತ್ನಂ
ಸಂಗೀತ / ಗಾಯನ – ಮೈಸೂರು ಅನಂತಸ್ವಾಮಿ
Nee nan attig belakangidde nanju / ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು – ಕನ್ನಡ ಭಾವಗೀತೆಗಲು
ಲಿಂಗಾಷ್ಟಕಂ ಸೋತ್ರಮ್ ಸಾಹಿತ್ಯ / LINGASHTAKAM STOTRAM LYRICS
ಮರಳಿ ಮನಸಾಗಿದೆ / Marali Manasaagide – ಚಿತ್ರ : ಜಂಟಲ್ಮನ್
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ/ Amma naanu devarane benne kaddillamma
Madikeri mel manju / ಮಡಿಕೇರಿ ಮೇಲ್ ಮಂಜು !
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಕೇರೀಲಿ ಮಂಜು!
ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಾಲ್ದು ಮಂಜು!
ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊ೦ಡ೦ಗೆ
ಮಡಕೇರೀನ ಎದೆಗೊತ್ಕೊಂಡಿ
ಜೂಗೀಡ್ಸ್ತಿತ್ತು ಮಂಜು!
ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಕೇರೀ ಮೇಲ್ ಮಂಜು!
ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ ಉದ್ದಾನೆ ಉಲ್ನಲ್ಲಿ
ಒಳಗೆ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!

ಗೀತರಚನೆಕಾರ: ಜಿ.ಪಿ.ರಾಜರಹಣಂ
ಚಿತ್ರ ಕ್ರೆಡಿಟ್: en.m.wikipedia.org
ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಟದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!
ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವವ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರೇ ಬರಲಿ
ಬಿಸಿಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
ಮಡಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ – ನನ್ ತಂಗೀದ್ದಂಗೆ
ಬಿಟ್ಟೂ ಬಿಡದಂಗ್ ಇಡಕೋ೦ತಿತ್ತು
ಮಡಕೇರೀಗೆ ಮಂಜು!
ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಕೇರೀಲಿ ಮಂಜು!
Madikeri mel manju / ಮಡಿಕೇರಿ ಮೇಲ್ ಮಂಜು !
ಮಡಿಕೇರಿ ಮೇಲ್ ಮಂಜು ಒಂದು ಸುಪ್ರಸಿದ್ದ ಕನ್ನಡ ಭಾವಗೀತೆ . ಈ ಸುಂದರ ಹಾಡಿನ ಸಾಹಿತ್ಯವನ್ನು ಜಿ.ಪಿ.ರಾಜರತ್ನಂ ಬರೆದಿದ್ದಾರೆ. ಮೈಸೂರು ಅನಂತಸ್ವಾಮಿ ಅವರ ಸಂಗೀತ / ಗಾಯನ. ಮಡಿಕೇರಿಯ ಸೌಂದರ್ಯ ನೋಡಲು ಬಲು ಚಂದ. ಮುಂಜಾನೆ ಸೂರ್ಯನು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದ್ದು ದಿನಿವಿಡಿ ಅದೇ ಸೌಂದರ್ಯ ನೋಡಲು ಸಿಗುವುದು .ನಾವು ಈ ಸುಂದರವಾದ ಹಿಮವನ್ನು ನೋಡುತ್ತಾ ಕುಳಿತಾಗ, ಅದು ಜೀವನದ ಅದೆಷ್ಟೋ ನೋವನ್ನು ಆ ಷ್ಕಣಕ್ಕೆ ಮರೆಸಿಬಿಡುತದ್ದೆ .
Nee nan attig belakangidde nanju / ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು – ಕನ್ನಡ ಭಾವಗೀತೆಗಲು
ಲಿಂಗಾಷ್ಟಕಂ ಸೋತ್ರಮ್ ಸಾಹಿತ್ಯ / LINGASHTAKAM STOTRAM LYRICS
ಮರಳಿ ಮನಸಾಗಿದೆ / Marali Manasaagide – ಚಿತ್ರ : ಜಂಟಲ್ಮನ್
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ/ Amma naanu devarane benne kaddillamma
ಸೂಚನೆ :
ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.
Do you have mp3 of this song?
No Sir, have YouTube link of locally sung songs. Can share it here if you want.