ಕೀರ್ತನಕಾರರು : ಪುರಂದರದಾಸರು

ರಾಗ :  ಜಂಜೂಟಿ

ತಾಳ : ಆದಿ 

ರಾಮಕೃಷ್ಣರು ಮನೆಗೆ ಬಂದರು / Ramakrishnaru Manege Bandaru

ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ              ।।ಪ।।

ಕಾಮಧೇನು ಬಂದಂತಾಯಿತು ವರವ ಬೇಡಿರೆ                    ।।ಅ.ಪ॥

ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ 

ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ 

ಹಿಂಡುವೆಣ್ಗಳ ಮುದ್ದು ಮುಖದ ಸೊಬಗ ನೋಡುತ 

ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ                  ।।೧।।

ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ             

ಕಾಮಧೇನು ಬಂದಂತಾಯಿತು ವರವ ಬೇಡಿರೆ                   

ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ 

ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ 

ಸುಕುಮಾರ ಸುಂದರವಾದ ಉಡಿಗೆ ಉಡುತಲಿ 

ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ           ।।೨।।

ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ             

ಕಾಮಧೇನು ಬಂದಂತಾಯಿತು ವರವ ಬೇಡಿರೆ                   

ಪೊಕ್ಕುಳಲಿ ಅಜನ ಪಡೆದ ದೇವದೇವನು 

ಚಿಕ್ಕ ಅಂಗುಷ್ಟದಲಿ ಗಂಗೆಯ ಪಡೆದನು 

ಮಕ್ಕಳ ಮಾಣಿಕ್ಯನವ ಪುರಂದರವಿಠಲನು 

ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು                 ।।೩।।

ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೆ             

ಕಾಮಧೇನು ಬಂದಂತಾಯಿತು ವರವ ಬೇಡಿರೆ                   

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.