ಮುಂಜಾನೆದ್ದು ಕುಂಬಾರಣ್ಣ – ಕನ್ನಡದಲ್ಲಿ ಸಾಹಿತ್ಯ

ಮುಂಜಾನೆದ್ದು ಕುಂಬಾರಣ್ಣ ಹಾಲು  ಬಾನುಂಡಾನ

ಹಾರ್ಯಾಡಿ ಮಣ್ಣಾ ತುಳಿದಾನ

ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ

ನಾರ್ಯಾರು ಹೊರುವಂತ ಐರಾಣಿ ||

ಹೊತ್ತಾರೆದ್ದು ಕುಂಬಾರಣ್ಣ ತುಪ್ಪ ಬಾನುಂಡಾನ

ಘಟೀಸಿ ಮಣ್ಣಾ ತುಳಿದಾನ

ಘಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ

ಮಿತ್ರೇರು ಹೊರುವಂತ ಐರಾಣಿ ||1||

ಮುಂಜಾನೆದ್ದು ಕುಂಬಾರಣ್ಣ ಹಾಲು  ಬಾನುಂಡಾನ

ಹಾರ್ಯಾಡಿ ಮಣ್ಣಾ ತುಳಿದಾನ

ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ

ಗಿಂಡಿಲಿ ತಂದೀವ್ನಿ ತಿಳಿದುಪ್ಪ

ಗಿಂಡಿಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ

ತಂದಿಡು ನಮ್ಮ ಐರಾಣಿ ||2||

ಮುಂಜಾನೆದ್ದು ಕುಂಬಾರಣ್ಣ ಹಾಲು  ಬಾನುಂಡಾನ

ಹಾರ್ಯಾಡಿ ಮಣ್ಣಾ ತುಳಿದಾನ

ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು

ಕೊಡದ ಮ್ಯಾಲೇನ ಬರೆದಾಳ

ಕೊಡದ ಮ್ಯಾಲೇನ ಬರೆದಾಳ ಕಲ್ಯಾಣದ

ಶರಣ ಬಸವನ ನಿಲಿಸ್ಯಾಳ||3||

ಮುಂಜಾನೆದ್ದು ಕುಂಬಾರಣ್ಣ ಹಾಲು  ಬಾನುಂಡಾನ

ಹಾರ್ಯಾಡಿ ಮಣ್ಣಾ ತುಳಿದಾನ

ಹಾರಿ ಹಾರ್ಯಾರಿ ಮಣ್ಣಾ ತುಳಿಯುತ್ತ ಮಾಡ್ಯಾನ

ನಾರ್ಯಾರು ಹೊರುವಂತ ಐರಾಣಿ ||

Barayya beladingale- Kannada Folk Song -Lyrics in English

Hrudaya samudra kalaki / ಹೃದಯ ಸಮುದ್ರ ಕಲಕಿ – ಕನ್ನಡ ಸಾಹಿತ್ಯ

ಕಲಿಯುಗದೊಳು ಹರಿನಾಮವ ನೆನೆದರೆ – Kaliyugadolu Harinaamava Nenedare –  ಸಾಹಿತ್ಯ ಶ್ರೀ ಪುರಂದರ ದಾಸರು

FAMOUS KANNADA FOLK SONG – MUNJAANEDDU KUMBAARANNA HAALU BAANUNDANA/ ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.