ಕೀರ್ತನಕಾರರು : ವಿಜಯದಾಸರು

ರಾಗ :  ಪಂತುವರಾಳಿ 

ತಾಳ : ಆದಿ 

ಪವಮಾನ ಪವಮಾನ ಜಗದಾ ಪ್ರಾಣಾ /Pavamana Pavamana Jagada Prana – ಕನ್ನಡದಲ್ಲಿ ಸಾಹಿತ್ಯ

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ ।।ಪ॥

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಗಳ ಪ್ರಿಯ ।।ಅ.ಪ॥

ಹೇಮ ಕಚ್ಚುಟ ಉಪವೀತ ಧರಿಪ ಮಾರುತಾ 

ಕಾಮಾದಿ ವರ್ಗರಹಿತಾ

ವ್ಯೋಮಾದಿ ಸರ್ವವ್ಯಾವೃತಾ ನಿರ್ಭೀತಾ 

ರಾಮಚಂದ್ರನ ನಿಜದೂತಾ 

ಯಾಮ ಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ

ಮನಸಿಗೆ ಸುಖಸ್ತೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು ।।೧।।

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ

ವಜ್ರ ಶರೀರ ಗಂಭೀರ ಮುಕುಟಧರ 

ದುರ್ಜನವನ ಕುಠಾರ ನಿರ್ಜರ ಮಣಿದಯಾ 

ಪಾರಾವಾರ ಉದಾರಾ ಸಜ್ಜನರಘ ಪರಿಹಾರಾ 

ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು

ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ

ಹೆಜ್ಜೆಹೆಜ್ಜೆಗೆ ನಿನ್ನಬ್ಜ ಪಾದಧೂಳಿಮೂಜಗದಲಿ ಭವವರ್ಜಿತನೆನಿಸೊ ।।೨।।

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ

ಪ್ರಾಣ ಅಪಾನ ವ್ಯಾನೋದಾನ ಸಮಾನ 

ಆನಂದ ಭಾರತೀರಮಣ ನೀನೆ ಶರ್ವಾದಿ 

ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ

ನಾನು ನಿರುತದಲಿ ಏನೆಸಗುವೆ

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ 

ಪ್ರಾಣನಾಥಾ ಶ್ರೀವಿಜಯವಿಠ್ಠಲನ

ಕರುಣಿಸಿ ಕೊಡುವ ಭಾನಪ್ರಕಾಶಾ ।।೩।।

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಗಳ ಪ್ರಿಯ

ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನ…

ಪವಮಾನ ಪವಮಾನ ಜಗದಾ ಪ್ರಾಣಾ /Pavamana Pavamana Jagada Prana –

 

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.