ಚಲನಚಿತ್ರ: ಪೃಥ್ವಿ

ಭಾಷೆ : ಕನ್ನಡ

ಗೀತರಚನೆಕಾರ ಜಯಂತ್ ಕಾಯ್ಕಿಣಿ

ಗಾಯನ:  ಕುನಲ್ ಗಂಜವಲ, ಹಂಸಿಕ ಐಯ್ಯರ್

ಸಂಗೀತ ನಿರ್ದೇಶಕ: ಮಣಿಕಾಂತ್ ಕದ್ರಿ

ಲೇಬಲ್ : ಆನಂದ್ ಆಡಿಯೋ ವರ್ಷ 2010

ತಾರಾಗಣ : ಅವಿನಾಶ್, ಪಾರ್ವತಿ ಮೆನನ್, ಪುನೀತ್ ರಾಜ್ ಕುಮಾರ್, ಸಾಧು ಕೋಕಿಲ

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ /Ninagende Visheshavada Song – ಕನ್ನಡದಲ್ಲಿ ಸಾಹಿತ್ಯ

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ

ನಿನಗಿಂತಾ ವಿಶೇಷವಾದ ಸಂಗತಿ ಇನ್ನೆಲ್ಲಿ

ಈಗ ಮಾತನಾಡದೆ ಏನನು, ನೀನು ಕೂತಿರು ಕಣ್ಣಲ್ಲಿ

ನನಗಂತೂ ವಿಶೇಷವಾದ ಅಕ್ಕರೆ ನಿನ್ನಲ್ಲಿ

ನಿನಗಿಂತಾ ವಿಶೇಷವಾದ ಅಚ್ಚರಿ ಇನ್ನೆಲ್ಲಿ

ಈಗ ನೀನು ಎಲ್ಲಿಯೇ ಹೋದರೂ, ನಾನು ಹಾಜರು ಬೆನ್ನಲ್ಲಿ

ನೀ ನೋಡುತಾ ಮೈಯ್ಯ ಮರೆವಾಗ, ಸಂತೋಷವೇ ರೂಪುಗೊಂಡಂತೆ

ಈ ತೋಳಿನ ಬಂಧ ದೊರೆತಾಗ, ಮುಂಜಾವಲಿ ಕನಸು ಕಂಡಂತೆ

ಕೈಯಲ್ಲಿ ಕೈ ಇದ್ದರೇ ನಮ್ಮ ಹೆಜ್ಜೆಯೊಂದಾಗಿದೆ

ಗಡಿಯಾರ ಬಂದ್ ಆಗಿದೆ, ಓಹೋ!

ತುಸು ದೂರ ಇದ್ದಾಗಲೇ ನನ್ನ ನಂಟು ಹೆಚ್ಚಾಗಿದೆ

ಈಗಂತು ಹುಚ್ಚಾಗಿದೆ, ಓಹೋ!

ನಿನಗೆಂದೇ ವಿಶೇಷವಾದ ಮೋಹವು ನನ್ನಲ್ಲಿ

ನಿನಗಿಂತಾ ವಿಶೇಷವಾದ ಜೀವವೂ ಇನ್ನೆಲ್ಲಿ

ನಾನಡಲು ಹೋದ ಮಾತೆಲ್ಲಾ, ನೀ ಸೋಕಲು ಪೂರ್ತಿಯಾದಂತೆ

ಮಾತಿಲ್ಲದೆ ಮುದ್ದುಗರೇವಾಗಾ, ಈ ಬಾಯಿಗೆ ಜೀವ ಬಂದಂತೆ

ಬರಿ ನಿನ್ನ ಕುರಿತಾಗಿಯೇ ನನ್ನ ಹೃದಯ ಪರದಾಡಿದೆ

ನಿನ್ನತ್ತ ಸರಿದಾಡಿದೆ, ಓಹೋ!

ಹೊಸದಾಗಿ ನಿನ್ನೊಂದಿಗೆ ಮತ್ತೇ ಮತ್ತೆ ಒಲವಾಗಿದೆ

ಇನ್ನೂನು ಬಲವಾಗಿದೆ, ಓಹೋ!

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ

ನಿನಗಿಂತಾ ವಿಶೇಷವಾದ ಸಂಗತಿ ಇನ್ನೆಲ್ಲಿ

ಈಗ ಮಾತನಾಡದೆ ಏನನು, ನೀನು ಕೂತಿರು ಕಣ್ಣಲ್ಲಿ

ನಿನಗೆಂದೇ ವಿಶೇಷವಾದ ಮಾಹಿತಿ ನನ್ನಲ್ಲಿ /Ninagende Visheshavada Song – ಕನ್ನಡದಲ್ಲಿ ಸಾಹಿತ್ಯ

Bhagyada Lakshmi Baramma / ಭಾಗ್ಯದ ಲಕ್ಷ್ಮಿ ಬಾರಮ್ಮ – ಪ್ರಸಿದ್ಧ(Famous) ಶ್ರೀ ಲಕ್ಷ್ಮಿ ಪೂಜಾ ಹಾಡು

Lambodara lakumikara – One of the Famous Purandara Daasara Keerthanegalu- Lyrics in English

Raghavendra Raghavendra Raghavendra Yenniri / ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ -ಪ್ರಸಿದ್ಧ (Famous) ರಾಘವೇಂದ್ರ ಸ್ವಾಮಿ ಪೂಜಾ ಹಾಡು–ಕನ್ನಡದಲ್ಲಿ ಸಾಹಿತ್ಯ

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.