ಸಾಹಿತ್ಯ: ಶ್ರೀ ಗಜನಾನ ಶರ್ಮಾ

ಪ್ರಕಾರ: ಭಕ್ತಿ

ಭಗವಾನ್: ರಾಮ

ಭಾಷೆ: ಕನ್ನಡ

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ರಾಮ ರಾಮ ರಾಮ ರಾಮ

ನೀನಿಷ್ಟದಂತೆನ್ನ ಇಟ್ಟಿರುವೆ ರಾಮ|

ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|

ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|

ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|

ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|

ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|

ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|

ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|

ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|

ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|

ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|

ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|

ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|

ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|

ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|

ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|

ನಾಳೆಗಳು ಪುಣ್ಯಗಳ ಹದಿಯಾಗಲಿ ರಾಮ|

ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|

ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|

ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|

ನನ್ನ ಹರಣಕೆ ನಿನ್ನ ಚಾರಣ ಕೊಡು ರಾಮ|

ಕೌಸಲ್ಯೆಯಾಗುವೆನು ಮಾಡಿಲಲಿರು ರಾಮ|

ವೈದೇಹಿಯಾಗುವೆನು ಒಡನಾಡು ರಾಮ|

ಪಾದುಕೆಯ ತಲೆಯಲಿಇಡು ಭಾರತನಾಗುವೆ ರಾಮ|

ಸಹವಾಸ ಕೊಡು ನಾನು ಸೌಮಿತ್ರಿ ರಾಮ|

ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|

ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|

ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|

ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|

ನಾ ವಿಭೀಷಣ ಶರಣುಭಾವ ಕೊಡು ರಾಮ|

ನನ್ನೊಳಿಹ ರಾವಣಗೆ ಸಾವ ಕೊಡು ರಾಮ|

ಕಣ್ಣೀರ ಕರೆಯುವೆನು ನನ್ನತನ ಕಲೆ ರಾಮ|

ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ಋತ ನೀನೆ ಋತು ನೀನೆ ಶೃತಿ ನೀನೆ ರಾಮ|

ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|

ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|

ಪೂರ್ಣ ನೀ ಪ್ರಕಟ ನೀ ಆನಂದ ರಾಮ|

ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|

ಗುರಿ ನೀನೆ ಗುರು ನೀನೆ ಅರಿವು ನೀ ರಾಮ|

ಗುರಿ ನೀನೆ ಗುರು ನೀನೆ ಅರಿವು ನೀ ರಾಮ|

ರಘುರಾಮ ರಘುರಾಮ ರಘುರಾಮ ರಘುರಾಮ|

ನಗುರಾಮ ನಗರಾಮ ಜಗರಾಮ ರಾಮ|

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|

ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

ರಾಮ ರಾಮ ರಾಮ ರಾಮ|

About – Innastu Bekenna Hrudayakke Rama

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಇದು ಶ್ರೀ ಗಜಾನನ ಶರ್ಮಾ ಬರೆದು ಸಂಯೋಜಿಸಿರುವ ಕನ್ನಡ ಭಕ್ತಿಗೀತೆ.

ಭಗವಾನ್ ರಾಮನನ್ನು ಹಿಂದೂಗಳಲ್ಲಿ ಯಾವಾಗಲೂ ಆದರ್ಶ ಮನುಷ್ಯ ಮತ್ತು ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಪೂಜಿಸುವ ದೇವತೆಗಳಲ್ಲಿ ಒಬ್ಬನೆಂದು ಪರಿಗಣಿಸಲಾಗುತ್ತದೆ. ಭಗವಾನ್ ರಾಮನು, ವಿಷ್ಣುವಿನ ದಶವತಾರದಲ್ಲಿ ವಿಷ್ಣುವಿನ ಏಳನೇ ಅವತಾರ. ರಾಮನು ಅಯೋಧ್ಯೆಯಲ್ಲಿ ರಾಜ ದಶರಥ ಮತ್ತು ಕೌಶಲ್ಯ ದಂಪತಿಯ ಹಿರಿಯ ಮಗನಾಗಿ ಜನಿಸಿದನು. ರಾಮನು ಸೀತಾ ದೇವಿಯನ್ನು ಮದುವೆಯಾದನು. ಲಾವಾ ಮತ್ತು ಕುಶಾ ರಾಮ ಮತ್ತು ಸೀತಾ ದೇವಿಯವರ ಪುತ್ರರು. ಲಕ್ಷ್ಮಣ, ಭರತ, ಮತ್ತು ಶತ್ರುಘ್ನನು ಭಗವಾನ್ ರಾಮನ ಒಡಹುಟ್ಟಿದವರು.

Haalalladaru haaku, Neeralladaru haaku Raghavendra

Yaavanig Gothu

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

Follow by Email
LinkedIn
Share
WhatsApp