ಕನ್ನಡ ಭಾವಗೀತೆ

ಹಾಡು: ಇದೋ ನಿಮಗೆ ವಂದನೆ

ಸಾಹಿತ್ಯ: ಜಿ.ಎಸ್ ಶಿವರುದ್ರಪ್ಪ

ಇದೋ ನಿಮಗೆ ವಂದನೆ / Ido Nimage Vandane

ಕಾರ್ಗಿಲ್ಲಿನ ಗಡಿಗಳಲ್ಲಿ

ಸಿಡಿಗುಂಡಿಗೆ ಎದೆಯನೊಡ್ಡಿ

ಕಾದಾಡುವ ಕಲಿಗಳೇ

ತತ್ತರಿಸುವ ಎತ್ತರದಲಿ

ಧೈರ್ಯದ ಧ್ವಜವೆತ್ತಿ ನಡೆವ

ಪರಾಕ್ರಮದ ಕಿಡಿಗಳೇ

ಇದೋ ನಿಮಗೆ ವಂದನೆ

ಕೃತಜ್ಞತೆಯ ವಂದನೆ.

ಶ್ವೇತ ಶುಭ್ರ ಹಿಮಾಲಯದ

ಭವ್ಯ ಧವಳ ಭಿತ್ತಿಗಳಲಿ

ರಕ್ತಲಿಪಿಯ ಶಾಸನಗಳ

ಬರೆದ ಮಹಾ ಕಲಿಗಳೇ

ಇದೋ ನಿಮಗೆ ವಂದನೆ

ಕೃತಜ್ಞತೆಯ ವಂದನೆ

ದುರ್ಗಮ ಹಿಮ ಶಿಖರದಲ್ಲಿ

ಆಕ್ರಮಣವನೆದುರಿಸುತ್ತ

ಹುತಾತ್ಮರಾದ ಯೋಧರೇ

ಸ್ಪಂದಿಸುತಿದೆ ನಿಮ್ಮ ಹಿಂದೆ

ಕಂಬನಿಯಲಿ ಹೆಮ್ಮೆಯಲ್ಲಿ

ಈ ಅಖಂಡ ದೇಶವೇ

ಇದೋ ನಿಮಗೆ ವಂದನೆ

ಕೃತಜ್ಞತೆಯ ವಂದನೆ.

ಇದೋ ನಿಮಗೆ ವಂದನೆ / Ido Nimage Vandane

kn.wikipedia.org/wiki/ಜಿ.ಎಸ್.ಶಿವರುದ್ರಪ್ಪ(opens in a new tab)

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.