Famous Keerthane By Purandara Daasaru  -Nammamma Sharade – ನಮ್ಮಮ್ಮ ಶಾರದೆ

Famous Keerthane By Purandara Daasaru -Nammamma Sharade – ನಮ್ಮಮ್ಮ ಶಾರದೆ

 ಪುರಂದರ ದಾಸರು

Nammamma Sharade – ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

ಕಮ್ಮಗೋಲನ ವೈರಿ ಸುತನಾದ ಸೊಂಡಿಲ

ಹೆಮ್ಮೆಯ ಗಣನಾಥನೇ…  ಕಣಮ್ಮ

 ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ

ಕೋರೆದಾಡೆಯನಾರಮ್ಮಾ

ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ

ಧೀರ ತಾ ಗಣನಾಥನೇ …… ಕಣಮ್ಮ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ

ದಿಟ್ಟ ತಾ ನಿವನಾರಮ್ಮ

ಪಟ್ಟದ ರಾಣಿ ಪಾರ್ವತಿಯ ಕುಮಾರನು

ಹೊಟ್ಟೆಯ ಗಣನಾಥನೇ… ಕಣಮ್ಮ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ

ಭಾಷಿಗನಿವನಾರಮ್ಮ

ಲೇಸಾಗಿ ಜನರ ಸಲಹುವ ಕಾಗಿ ನೆಲೆ ಆದಿಕೇಶವ ದಾಸ ಕಣೇ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

 ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

 ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ

ನಿಮ್ಮೊಳಗಿಹನಾರಮ್ಮಾ

ನಿಮ್ಮೊಳಗಿಹನಾರಮ್ಮಾ….

 

ಬದುಕು ಮಾಯೆಯ ಮಾಟ/Baduku Mayeya Maata

ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಬ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

 – ಅಂಬಿಕಾತನಯದತ್ತ  

ಬದುಕು ಮಾಯೆಯ ಮಾಟ/Baduku Mayeya Maata

ಕಟ್ಟುವೆವು ನಾವು / Kattuvevu Naavu

ಮೊಗೇರಿ ಗೋಪಾಲಕೃಷ್ಣ ಅಡಿಗ

ಕಟ್ಟುವೆವು ನಾವು ಹೊಸ ನಾಡೊಂದನು, – ರಸದ ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

ನಮ್ಮೆದೆಯ ಕನಸುಗಳೇ ಕಾಮಧೇನು
ಆದಾವು, ಕರೆದಾವು ವಾ೦ಛಿತವನು
ಕರೆವ ಕೈಗಿಹುದೋ ಕನಸುಗಳ ಹರಕೆ;
 ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

ನಾವು ಹಿಂದೆಗೆವೆವೇ? ವೀರ ತರುಣರು ನಾವು!
ಒಂದೆ ನೆಗೆತಕೆ ನೆಗೆವೆವೋ ಕಂದಕವನು,
ಕುಟ್ಟಿ ಪುಡಿಮಾಡುವೆವು ಕೋಟೆಗಳನು,            
ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

ಎಡರುಗಳ ಕಡಲುಗಳನೀಸಿ ಬರುವೆವು, ಘೋರ
ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ                  
ತೇಲಿ ಬರಲಿದೆ ನೋಡು, ನಮ್ಮ ನಾಡು!


ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು
ಹೊರಹೊಮ್ಮುವುದ ಕಾದು ನೋಡು!

ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು;
ಅದರ ಹಾರಾಟಕ್ಕೆ ಬಾನೆ ಗಡಿಯು,
 ಬರಲು ಬಿಡೆವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
ಕೊಟ್ಟೆವಿದೋ ವೀಳೆಯವನು;
ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
 ಕಟ್ಟುವೆವು ನಾವು ಹೊಸ ನಾಡೊಂದನು, – ಸುಖದ ಬೀಡೊಂದನು

ಕಟ್ಟುವೆವು ನಾವು / Kattuvevu Naavu

ಮೊಗೇರಿ ಗೋಪಾಲಕೃಷ್ಣ ಅಡಿಗ

Mayadantha male bantanna / ಮಾಯದಂತ ಮಳೆ ಬಂತಣ್ಣ  – ಕನ್ನಡ ಜಾನಪದ ಹಾಡುಗಳು – ಕನ್ನಡ ಸಾಹಿತ್ಯ

Mayadantha male bantanna / ಮಾಯದಂತ ಮಳೆ ಬಂತಣ್ಣ – ಕನ್ನಡ ಜಾನಪದ ಹಾಡುಗಳು – ಕನ್ನಡ ಸಾಹಿತ್ಯ

ಮಾಯದಂತ ಮಳೆ ಬಂತಣ್ಣ ಹಾಡು ಜನಪದ ಗೀತೆ ಅಥವಾ ಜಾನಪದ ಹಾಡು. ಇದು ಹಳ್ಳಿಗಳಲ್ಲಿ ಬಹಳ ಪ್ರಸಿದ್ಧವಾದ ಹಾಡು. ಈ ಹಾಡನ್ನು ಹಳ್ಳಿಯಲ್ಲಿ ಅನಿರೀಕ್ಷಿತ ಮಳೆಯ ಬಗ್ಗೆ ಬರೆಯಲಾಗಿದೆ, ಮತ್ತು ಜನರು ಆ ಕ್ಷಣವನ್ನು ಹೇಗೆ ಆಚರಿಸುತ್ತಾರೆ ಮತ್ತು ಆನಂದಿಸುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ.

Other Links:

Bhagayada Balegara/ ಭಾಗ್ಯದ ಬಳೆಗಾರ – ಕನ್ನಡ ಜಾನಪದ ಹಾಡು – ಕನ್ನಡ ಸಾಹಿತ್ಯ

Hrudaya samudra kalaki / ಹೃದಯ ಸಮುದ್ರ ಕಲಕಿ – ಕನ್ನಡ ಸಾಹಿತ್ಯ,

Lambodara lakumikara / ಲಂಬೋದರ ಲಕುಮಿಕರ – ಪುರಂದರ ದಾಸರ ಕೀರ್ತನೆಗಳು – ಕನ್ನಡ ಸಾಹಿತ್ಯ,

Hendathi obbalu maneyolagiddare / ಹೆಂಡತಿ ಒಬ್ಬಳು ಮನೆಯೊಳಗಿದ್ದರೆ – ಕನ್ನಡ ಭಾವಗೀತೆ,

Raghavendra Raghavendra Raghavendra Yenniri / ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ -ಪ್ರಸಿದ್ಧ (Famous) ರಾಘವೇಂದ್ರ ಸ್ವಾಮಿ ಪೂಜಾ ಹಾಡು–ಕನ್ನಡದಲ್ಲಿ ಸಾಹಿತ್ಯ,

Mayadantha male bantanna / ಮಾಯದಂತ ಮಳೆ ಬಂತಣ್ಣ – ಕನ್ನಡ ಜಾನಪದ ಹಾಡುಗಳು – ಕನ್ನಡ ಸಾಹಿತ್ಯ

ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ

ಅಂಗೈಯಗಳ ಮೋಡನಾಡಿ
ಭೂಮಿತೂಖದ ಗಾಳಿ ಭೀಸಿ
ಗುಡುಗಿ ಗೂಡಾಗಿ ಚೆಲ್ಲಿದಳೋ
ಗಂಗಮ್ಮ ತಾಯಿ ||

ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ ,
ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ

ಎರೀ ಮ್ಯಾಗಳ ಬಲ್ಲಾಳ ರಾಯ 
ಕೆರೆಯ ಒಲಗಡೆ ಬೆಸ್ತರ ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ
  ನಾ ನಿಲ್ಲುವವಳಲ್ಲ ||

ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ ,
ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ

ಆರು ಸಾವಿರ ಒಡ್ಡರ ಕರಸಿ ಮೂರು
ಸಾವಿರ ಗುದ್ದಲಿ ತರಿಸಿ
ಸೋಲು ಸೋಲಿಗೆ ಮಣ್ಣನ
ಹಾಕಿಸಯ್ಯೋ ನಾ ನಿಲ್ಲುವವಳಲ್ಲ ||

ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ

ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಗೋಳು ತರಿಸಿ
ಕಲ್ಲು ಕಲ್ಲಿಗೆ ರೈತವ
ಬಿಡಿಸಯ್ಯೊ ನ ನಿಲ್ಲುವವಳಲ್ಲ||

ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ

ಒಂದು ಬಂಡೀಲಿ ವಿಳೇದಡಿಕೆಒಂದು
ಬಂಡೀಲಿ ಚಿಗಿಲಿ ತಮಟ
ಮೂಲೆ ಮೂಲೇಗು ಗಂಗಮ್ಮನ
ಮಾಡಿಸಯ್ಯೊ ನ ನಿಲ್ಲುವವಳಲ ||

ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ 
ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ
ಮದಗಾದ ಕೆರೆಗೆ

Mayadantha male bantanna / ಮಾಯದಂತ ಮಳೆ ಬಂತಣ್ಣ- ಚಿತ್ರ : ಸೆವಂತಿ ಸೆವಂತಿ

ಎಸ್.ನಾರಾಯಣ್ ನಿರ್ದೇಶನದ ಮತ್ತು ಬರೆದ ಕನ್ನಡ ಚಲನಚಿತ್ರ ಸೆವಂತಿ ಸೆವಂತಿಯಲ್ಲೂ ಈ ಹಾಡನ್ನು ಬಳಸಲಾಗಿದೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ರಮ್ಯಾ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಪಾರ್ವತಮ್ಮ ರಾಜ್‌ಕುಮಾರ್ ಪ್ರಸ್ತುತಪಡಿಸಿದ್ದಾರೆ. ಎಸ್.ಎ.ರಾಜ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ

Bhagayada Balegara/ ಭಾಗ್ಯದ ಬಳೆಗಾರ – ಕನ್ನಡ ಜಾನಪದ ಹಾಡು – ಕನ್ನಡ ಸಾಹಿತ್ಯ

Hrudaya samudra kalaki / ಹೃದಯ ಸಮುದ್ರ ಕಲಕಿ – ಕನ್ನಡ ಸಾಹಿತ್ಯ,

Lambodara lakumikara / ಲಂಬೋದರ ಲಕುಮಿಕರ – ಪುರಂದರ ದಾಸರ ಕೀರ್ತನೆಗಳು – ಕನ್ನಡ ಸಾಹಿತ್ಯ,

Hendathi obbalu maneyolagiddare / ಹೆಂಡತಿ ಒಬ್ಬಳು ಮನೆಯೊಳಗಿದ್ದರೆ – ಕನ್ನಡ ಭಾವಗೀತೆ,

Raghavendra Raghavendra Raghavendra Yenniri / ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ -ಪ್ರಸಿದ್ಧ (Famous) ರಾಘವೇಂದ್ರ ಸ್ವಾಮಿ ಪೂಜಾ ಹಾಡು–ಕನ್ನಡದಲ್ಲಿ ಸಾಹಿತ್ಯ,

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.

ಪಾತರಗಿತ್ತೀ ಪಕ್ಕಾ / Paataragitti pakka – ದ. ರಾ. ಬೇಂದ್ರೆ

ಪಾತರಗಿತ್ತೀ ಪಕ್ಕಾ ನೋಡೀದೇನS  ಅಕ್ಕಾ!
ಪಾತರಗಿತ್ತೀ ಪಕ್ಕಾ ನೋಡೀದೇನS  ಅಕ್ಕಾ!  ॥ ಪ ॥ ೧

ಹಸಿರು ಹಚ್ಚಿ ಚುಚ್ಚಿಮೇಲSಕರಿಸಿಣ ಹಚ್ಚಿ, ೨
ಪಾತರಗಿತ್ತೀ ಪಕ್ಕಾ ನೋಡೀದೇನS  ಅಕ್ಕಾ!

ಹೊನ್ನ ಚಿಕ್ಕಿ ಚಿಕ್ಕಿ
ಇಟ್ಟು ಬೆಳ್ಳೀ ಅಕ್ಕಿ, ೩

ಸುತ್ತೂ ಕುಂಕುಮದೆಳಿ
ಎಳೆದು ಕಾಡಿಗೆ ಸುಳಿ, ೪

ಗಾಳೀ ಕೆನೀಲೇನS
ಮಾಡಿದ್ದಾರ ತಾನ! ೫  

ನೂರು ಆರು ಪಾರು
ಯಾರು ಮಾಡಿದ್ದಾರು! ೬

ಏನು ಬಣ್ಣ ಬಣ್ಣ
ನಡುವೆ ನವಿಲಗಣ್ಣ! ೭

ರೇಶಿಮೆ ಪಕ್ಕ ನಯ
ಮುಟ್ಟಲಾರೆ ಭಯ! ೮

ಹೂವಿನ ಪಕಳಿಗಿಂತ
ತಿಳಿವು ತಿಳಿವು ಅಂತ? ೯

ಹೂವಿಗೆ ಹೋಗಿ ತಾವ
ಗಲ್ಲಾ ತಿವಿತಾವ, ೧೦

ಬನ ಬನದಾಗ ಆಡಿ
ಪಕ್ಕಾ ಹುಡಿ ಹುಡಿ; ೧೧

ಹುಲ್ಲುಗಾವುಲದಾಗ
ಹಳ್ಳೀಹುಡುಗೀ ಹಾಂಗ – ೧೨

ಹುಡದೀ ಹುಡದೀ ಭಾಳ
ಆಟಕ್ಕಿಲ್ಲ ತಾಳ. ೧೩

ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ. ೧೪

ತುರುಬಿ ತುಂಬಿ ತೋಟ –
ದಲ್ಲಿ ದಿನದ ಊಟ. ೧೫

ಕಳ್ಳಿ ಹೂವ ಕಡಿದು
ಹೂತುಟಿನೀರ ಕುಡಿದು; ೧೬

ನಾಯಿ ಛತ್ತರಿಗ್ಯಾಗ
ಕೂತು ಮೊಜಿನ್ಯಾಗ, ೧೭

ರುದ್ರಗಂಟಿ ಮೂಸಿ
ವಿಷ್ಣುಗಂಟಿ ಹಾಸಿ, ೧೮

ಹೇಸಿಗೆ ಹೂವ ಬಳಿಗೆ
ಹೋಗಿ ಒಂದSಗಳಿಗೆ, ೧೯

ಮದಗುಣಿಕಿಯ ಮದ್ದು 
ಹುರುಪಿಗಿಷ್ಟು ಮೆದ್ದು, ೨೦

ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ, ೨೧ 

ಸೀಗಿಬಳ್ಳಿ ತಾಗಿ 
ಪಕ್ಕಾ ಬೆಳ್ಳಗಾಗಿ, ೨೨  

ಗೊರಟಿಗೆಗೆ ಶರಣ 
ಮಾಡಿ ದೂರಿಂದSನ  ೨೩

ಮಾಲಿಂಗನ ಬಳ್ಳಿ 
ತೂಗೂ ಮಂಚದಲ್ಲಿ, ೨೪  

ತೂಗಿ ತೂಗಿ ತೂಗಿ 
ದಣಿದ್ಹಾಂಗ ಆಗಿ, ೨೫ 

ಬೇಲೀ ಬಳ್ಳಿಯೊಳಗ 
ಅದರ ನೆರಳ ತೆಳಗ  ೨೬ 

ನಿದ್ದಿಗುಳ್ಯಾಡಿ 
ಪಗಡಿ ಪಕ್ಕಾ ಆಡಿ, ೨೭  

ಗುಲಬಾಕ್ಷಿಯ ಹೂವ 
ಕುಶಲ ಕೇಳತಾವ; ೨೮ 

ಹುಡಿಯ ನೀರಿನ್ಯಾಗ 
ತುಳಕಿಸುತ್ತ ಬ್ಯಾಗ  ೨೯ 

ಹಡಿಯೆ ಬೀಜ ಗಂಡು 
ಹಾರಹರಿಕಿ ಅಂದು, ೩೦  

ಅಡವಿ ಮಲ್ಲಿಗಿ ಕಂಡು 
ಅದರ ಕಂಪನುಂಡು, ೩೧  

ಹುಲ್ಲ ಹೊಲಕ ಬಂದು 
ಗುಬ್ಬಿ ಬೆಳಸಿ ತಿಂದು, ೩೨ 

ಇಷ್ಟು ಎಲ್ಲಾ ಮಾಡಿ 
ಸಪ್ಪಳಿಲ್ಲದಾಡಿ, ೩೩ 

ತಾಳ ಚವ್ವ ಚಕ್ಕ 
ಕುಣಿತ ತಕ್ಕ ತಕ್ಕ; ೩೪ 

ಆಸಿ ಹಚ್ಚಿ ಹ್ಯಾಂಗ 
ಕಂಡು ಸಿಕ್ಕಧಾಂಗ  ೩೫ 

ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS.  ೩೬ 

ಕಾಣದೆಲ್ಲೋ ಮೂಡಿ 
ಬಂದು ಗಾಳಿ ಗೂಡಿ, ೩೭ 

ಇನ್ನು ಎಲ್ಲಿಗೋಟ?
ನಂದನದ ತೋಟ!

                                               – ಅಂಬಿಕಾತನಯದತ್ತ 

 ದ. ರಾ. ಬೇಂದ್ರೆ

ಪಾತರಗಿತ್ತೀ ಪಕ್ಕಾ / Paataragitti pakka-  ದ. ರಾ. ಬೇಂದ್ರೆ

ಇದು ಮೂಲ ಕವನದ ಪೂರ್ಣಪಾಠ. ಕೆಲವೇ ಕೆಲವು ಚರಣಗಳನ್ನು ಭಾವಗೀತೆಯಲ್ಲಿ ಬಳಸಿಕೊಳ್ಳಲಾಗಿದೆ. ಇದು  ದ. ರಾ. ಬೇಂದ್ರೆ ರಚನೆ