ಯಾಕೋ ಕಾಣೆ ರುದ್ರ ವೀಣೆ

ಮಿಡಿಯುತಿರುವುದು

ಜೀವದಾಣೆಯಂತೆ ತಾನೆ

ನುಡಿಯುತಿರುವುದು.

ತಂತಿ ಮಿಂಚಿ ನಡುಗುತಿದೆ

ಸೊಲ್ಲು ಸಿಡಿದು ಗುಡುಗುತಿದೆ

ಮಿಡಿದ ಬೆರಳು ಅಡಗುತಿದೆ

ಮುಗಿಲ ಬಯಲಲಿ.

ಚಿಕ್ಕೆ ಬಾಲ ಬೀಸುತಿವೆ

ಸೂರ್ಯಚಂದ್ರ ಈಸುತಿವೆ

ಹೊಸ ಬೆಳಕನೆ ಹಾಸುತಿವೆ

ಕಾಲ ಪಥದಲಿ.

ಧರ್ಮಾಸನ ಹೊರಳುತಿವೆ

ಸಿಂಹಾಸನ ಉರುಳುತಿವೆ

ಜಾತಿ ಪಂಥ ತೆರಳುತಿವೆ

ಮನದ ಮರೆಯಲಿ.

ನೆಲದ ಬಸಿರೊಳುರಿಯುತಿದೆ

ಬೆಟ್ಟದೆದೆಯು ಬಿರಿಯುತಿದೆ

ನೀರು ಮೀರಿ ಹರಿಯುತಿದೆ

ಕೆಂಪು ನೆಲದಲಿ.

                                    -ಅಂಬಿಕಾತನಯ ದತ್ತ

ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene- ಕನ್ನಡದಲ್ಲಿ ಸಾಹಿತ್ಯ

ಕೋಡಗನ ಕೋಳಿ ನುಂಗಿತ್ತಾ / Kodagana Koli Nungitha – ಸಂತಾ ಶಿಶುನಾಳ್ ಷರೀಫ್

Raghavendra Raghavendra Raghavendra Yenniri / ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿ -ಪ್ರಸಿದ್ಧ (Famous) ರಾಘವೇಂದ್ರ ಸ್ವಾಮಿ ಪೂಜಾ ಹಾಡು–ಕನ್ನಡದಲ್ಲಿ ಸಾಹಿತ್ಯ

Hrudaya samudra kalaki / ಹೃದಯ ಸಮುದ್ರ ಕಲಕಿ – ಕನ್ನಡ ಸಾಹಿತ್ಯ

ಸೂಚನೆ :

ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!

ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.