Album: Mysore Mallige – Lyricist: K S Narasimhaswamy – Singer: Mysore Ananthaswamy, Sunitha & RajuHendatiyobbalu Maneyolagiddare Language: Kannada Released on: 01.01.1990 |
Madikeri Mel Manju – Famous Kannada Bhavageethe
Lalitha Sahasranama Stotram Lyrics in English
Hendathi obbalu maneyolagiddare / ಹೆಂಡತಿ ಒಬ್ಬಳು ಮನೆಯೊಳಗಿದ್ದರೆ – ಕನ್ನಡ ಭಾವಗೀತೆ
ಹೆಂಡತಿ ಒಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಹೆಂಡತಿ ಒಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ |
ಹೆಂಡತಿ ಒಬ್ಬಳು ಮನೆಯೊಳಗಿದ್ದರೆ …ಹುಣ್ಣಿಮೆ ಹೋಳಿಗೆ ದೀಪ ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿಲ್ಲದ ಕೋಪ. |
ಹಬ್ಬಿಗನೂರಿಗೆ ದಾರಿಯು ಇದ್ದರೆ ಕನಸೇ ಇರಬೇಕು ಅಲ್ಲಿಯ ದೊರೆತನ ಸಿಗುವಂತಿದ್ದರೆ ನನಗೇ ಸಿಗಬೇಕು |
ತಾರೆಯ ಬೆಳಕಿನ ತುಂಬಿದ ಸಭೆಯಲಿ ಸುಂದರಿ ಮೆರೆದಾಳು ನನ್ನೊಡನವಳು ಸಿಂಹಾಸನದಲಿ ಮೆಲ್ಲನೆ ನಕ್ಕಾಳು |
ಚಂದಿರನೂರಿನ ಅರಮನೆಯಿಂದ ಬಂದವರೀಗೆಲ್ಲಿ ಬೆಳ್ಳಿಯ ಕೋಟೆಯ ಬಾಗಿಲಿನಿಂದ ಬಂದವರೀಗೆಲ್ಲಿ |
ಹೆಂಡತಿಯೊಂದಿಗೆ ಬಡತನ ದೊರೆತನ ಏನೂ ಭಯವಿಲ್ಲ ಹೆಂಡತಿ ಒಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ. |
ಹೆಂಡತಿ ಒಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಹೆಂಡತಿ ಒಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ |
Madikeri Mel Manju – Famous Kannada Bhavageethe
Lalitha Sahasranama Stotram Lyrics in English
ಮೈಸೂರು ಅನಂತಸ್ವಾಮಿ:
ಮೈಸೂರು ಅನಂತಸ್ವಾಮಿ ಕರ್ನಾಟಕದ ಕನ್ನಡ ಭವಗೀತೆ ಪ್ರವರ್ತಕರಾಗಿದ್ದರು. ಅವರು ಪ್ರಸಿದ್ಧ ಕನ್ನಡ ಸುಗಮ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದರು. ಕುವೇಂಪು, ಕೆ.ಎಸ್. ನಿಸ್ಸಾರ್ ಅಹ್ಮದ್, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಮತ್ತು ಇತರರು ಕವಿಗಳು ಬರೆದ ವಿವಿಧ ಕವನಗಳು ಮತ್ತು ಭಾವಗೀತೆಗಳನ್ನು ಅವರು ರಚಿಸಿದರು ಮತ್ತು ಜನಪ್ರಿಯಗೊಳಿಸಿದರು. ಜಯ ಭಾರತ ಜನಾನಿಯಾ ತನುಜಾಥೆ, ಮತ್ತು ಎದೆ ತುಂಬಿ ಹಾಡಿಡೆನು ಅವರ ಅತ್ಯಂತ ಮಾನ್ಯತೆ ಪಡೆದ ಹಾಡುಗಳು. ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಸೂಚನೆ :
ಮೇಲಿನ ಸಾಹಿತ್ಯದಲ್ಲಿ ನೀವು ಯಾವುದೇ ರೀತಿಯ ತಪ್ಪುಗಳನ್ನು ಕಂಡುಕೊಂಡರೆ, ದಯವಿಟ್ಟು ಅವುಗಳನ್ನು ಕಾಮೆಂಟ್ ವಿಭಾಗದಲ್ಲಿ ನಮೂದಿಸಿ. ನಾವು ಅವುಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ!
ನಿಮ್ಮ ನೆಚ್ಚಿನ ಹಾಡಿನ ಸಾಹಿತ್ಯ ಹುಡುಕಲು ಸಾಧ್ಯವಾಗದಿದ್ದರೆ ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ವಿನಂತಿಯನ್ನು ಸಲ್ಲಿಸಿ.