Lyricist – Dr.H.S Venkateshmurthy
Singer – Kikkeri Krishnamurthy, Ramesh Chandra, Vaishnava Rao, Jairam,
Shivashankar, Sunitha, Mangala, Nagachandrika, Vrinda Rao

H_S_Venkatesha_Murthy
Lyricist– H_S_Venkatesha_Murthy

Elegalu nooraaru Bhaavada Elegalu Nooraaru / ಎಲೆಗಳು ನೂರಾರು ಭಾವದ ಎಳೆಗಳು ನೂರಾರು

ಎಲೆಗಳು ನೂರಾರು ಭಾವದ ಎಳೆಗಳು ನೂರಾರು 
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ, ಭಾಷೆ, ಪಂಥ ಹಲವು 
ಅವುಗಳ ಹಿಂದೆ ಮಾತ್ರ ಒಂದೇ ಒಲವು 
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ 
ನೀಗೋಣ ಭಿನ್ನತೆ ನೀಗೋಣ 
ಸಾವಿರ ಹೆಜ್ಜೆ ಒಂದೇ ಗುರಿಗಾಗಿ ||

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 
ಬೆಳಕಿನ ಪರಿಗೆ ಒಂದೇ ಹೆಸರು 
ಸೂರ್ಯ, ಚಂದ್ರ, ಲಾಂದ್ರ, ಹಣತೆ,
ಅವುಗಳ ಹಿಂದೆ ಮಾತ್ರ ಒಂದೇ ಘನತೆ 
ತೆರೆಯೋಣ ಹೃದಯ ತೆರೆಯೋಣ 
ನಾವು ನೀವು ಸೇರಿ ಒಂದಾಗಿ 
ಮರೆಯೋಣ ಭೇದ ಮರೆಯೋಣ 
ನದಿಗಳು ಕೂಡಿದ ಪ್ರೀತಿಯ ಕಡಲಾಗಿ ||

ಪದಗಳು ನೂರಾರು ಬದುಕಿನ ಹದಗಳು ನೂರಾರು 
ಪದಗಳ ಹಿಂದೆ ಒಂದೇ ಉಸಿರು 
ಅಕ್ಕರೆಯಿಂದ ಒಟ್ಟಿಗೆ ಬಾಳೋಣ 
ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ 
ಕಟ್ಟೋಣ ನಾಡನು ಕಟ್ಟೋಣ 
ನಾವು ನೀವು ಸೇರಿ ಒಂದಾಗಿ 
ಮುಟ್ಟೋಣ ಬಾನನು* ಮುಟ್ಟೋಣ
ತಾರೆಗಳೇ ಈ ನಾಡಿನ ಸೂರಾಗಿ ||

Elegalu nooraaru Bhaavada Elegalu Nooraaru / ಎಲೆಗಳು ನೂರಾರು ಭಾವದ ಎಳೆಗಳು ನೂರಾರು– Kannada Bhaavageethegalu- Kannada Lyrics